ಮಂಡ್ಯ : ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಓ ಹಾಗೂ ಮಧ್ಯವರ್ತಿ ಲೋಕಾ ಬಲೆಗೆ ಬಿದ್ದಿದ್ದಾರೆ. ಮಂಡ್ಯದ ಮದ್ದೂರು ತಾಲೂಕಿನ ಹೊಸಕೆರೆ ಗ್ರಾ.ಪಂ ಅಲ್ಲಿ ಘಟನೆ ನಡೆದಿದೆ.
ಹೊಸಕೆರೆ ಗ್ರಾ.ಪಂ ಪಿಡಿಓ ಮಂಜಮ್ಮ, ಮಧ್ಯವರ್ತಿ ಅಭಿಷೇಕ್ ಲಂಚಕ್ಕೆ ಬೇಡಿಕೆ ಇಟ್ಟವರು ಸಿಕ್ಕಿಬಿದ್ದವರು ಎಂದು ತಿಳಿಸಿದ್ದಾರೆ. ಕೊತ್ತನಹಳ್ಳಿ ಗ್ರಾಮ ಕೃಷ್ಣೇಗೌಡ ಬಳಿ ನಿವೇಶನವೊಂದರ ಖಾತೆ ಮಾಡಿಕೊಡಲು 1 ಲಕ್ಷದ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದೂರು ದಾಖಲಿಸಿ ತನಿಖೆ ಕೈಗೊಂಡ ಲೋಕಾ ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.
ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಡಿಎಸ್ ಪಿ ಸುನೀಲ್ ಕುಮಾರ್, ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ.