ಬಾದಾಮಿ : ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸಿದ್ದು, ವಿದ್ಯಾರ್ಥಿನಿಯರ ಅಭ್ಯಾಸದ ಪ್ರಗತಿಗೆ ಪ್ರೇರಣೆ ನೀಡಲು ಶಾಲೆಯ ಶಿಕ್ಷಕ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಪೋಷಕರಿಗೆ ಮತ್ತು ಮಕ್ಕಳಿಗೆ ತಿಳಿವಳಿಕೆ ನೀಡಿದರು.
ಇಲ್ಲಿನ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಎಸ್.ಬಿ.ಸಿ. ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕ ಸಿಬ್ಬಂದಿ ವಾರದಿಂದ ಗ್ರಾಮೀಣ ಪ್ರದೇಶ ಮತ್ತು ಪಟ್ಟಣದ ಅನೇಕ ಮನೆಗಳಿಗೆ ಭಾನುವಾರ ಭೇಟಿ ನೀಡಿದರು.
‘ಪರೀಕ್ಷೆ ಮುಗಿಯುವವರೆಗೆ ಹೆಣ್ಣುಮಕ್ಕಳಿಂದ ಹೆಚ್ಚು ಕೆಲಸ ಮಾಡಿಸದೇ ಅಭ್ಯಾಸ ಮಾಡುವಂತೆ ಹೇಳಿ. ಓದಲು ಮಕ್ಕಳನ್ನು ಬೆಳಿಗ್ಗೆ ಬೇಗ ಎಚ್ಚರಿಸಿ. ಮಕ್ಕಳು ಸಂಭ್ರಮದಿಂದ ಪರೀಕ್ಷೆಯನ್ನು ಬರೆಯಲಿ’ ಎಂದು ಶಿಕ್ಷಕರು ಹೇಳಿದರು.