ಕೋಲಾರ : ಇ-ಖಾತಾ ಮಾಡಿಕೊಡಲು ಲಂಚ ಪಡೆಯುವ ವೇಳೆ ತಾಲೂಕಿನ ಅರೆಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಿವಾನಂದ ಕುಮಾರ್ (55), ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಕೋಡಿಕಣ್ಣೂರು ಗ್ರಾಮದ ಎಂ.ನಾಗರಾಜು ಎಂಬುವರಿಂದ ಆರೋಪಿ ₹ 5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಜಿಲ್ಲಾ ಪೊಲೀಸ್‌ ಅಧೀಕ್ಷಕ ಬಿ.ಕೆ.ಉಮೇಶ್‌ ನೇತೃತ್ವದ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಹಣ ವಶಕ್ಕೆ ಪಡೆದು ಪಿಡಿಒ ಶಿವಾನಂದ ಕುಮಾರ್ ಎಂಬುವರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗಿದೆ’ ಎಂದು ಉಮೇಶ್ ಅವರು ಸೂಚಿಸಿದ್ದಾರೆ.

‘ಇ-ಖಾತಾ ವಿಚಾರವಾಗಿ ನಾಗರಾಜು ಎಂಬುವವರು ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ಪಿಡಿಯೋ ₹ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಾರ್ಚ್ 13 ರಂದು ₹ 5 ಸಾವಿರ ನಗದು ಹಾಗೂ ಇನ್ನು ₹ 5 ಸಾವಿರವನ್ನು ಫೋನ್‌ ಪೇ ಮೂಲಕ ಬಳಸಿದ್ದರು. ಈ ₹ 5 ಸಾವಿರ ನೀಡುವಂತೆ ಒತ್ತಾಯಿಸಿ. ಈ ಸಂಬಂಧ ನಾಗರಾಜು ದೂರು ನೀಡಿದ್ದರು. ಆ ದೂರಿನ ಮೇಲೆ ಬುಧವಾರ ದಾಳಿ ನಡೆಸಿದ್ದು, ಕಚೇರಿಯಲ್ಲಿ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ’ ಎಂದು ಹೇಳಿದರು.

ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಯಶವಂತಕುಮಾರ್‌, ಆಂಜನಪ್ಪ, ಸಿಬ್ಬಂದಿ ವಾಸು, ಸುಬ್ರಮಣಿ, ನಾಗವೇಣಿ, ಪವಿತ್ರಾ, ದ್ಯಾವಪ್ಪ ಹಾಗೂ ನಾಗಭೂಷಣ್‌.

Leave a Reply

Your email address will not be published. Required fields are marked *