ವಿಜಯನಗರ :- ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾದ ಘಟನೆ ಹೊಸಪೇಟೆ ತಾಲೂಕಿನ ನಲ್ಲಾಪುರ ಗ್ರಾಮದಲ್ಲಿ ಜರುಗಿದೆ.
ಓವರ್ ಹೆಡ್ ಟ್ಯಾಂಕ್ ಸ್ವಚ್ಚ ಮಾಡದೇ ಇರೋದು ಘಟನೆಗೆ ಕಾರಣವಂತೆ. ಹಬ್ಬದ ಸಮಯದಲ್ಲಿ ಪೈಪ್ಲೈನ್ ಗಳಲ್ಲಿ ಕಲುಷಿತ ನೀರು ಪೂರೈಕೆಯಾಗಿದೆ ಅನ್ಮೋ ಆರೋಪ ಕೇಳಿ ಬಂದಿದೆ.
ಇದುವರೆಗೆ 18 ಜನರು ವಾಂತಿ- ಬೇಧಿಯಿಂದ ಬಳಲುತ್ತಿದ್ದಾರೆ. ಇಬ್ಬರು ಮಾತ್ರ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಉಳಿದವರು ಸ್ಟೇಬಲ್ ಇದ್ದಾರೆ. ಘಟನೆ ಹಿನ್ನೆಲೆ ವಿಜಯನಗರ ಜಿಪಂ ಸಿಇಓ ಸದಾಶಿವ ಪ್ರಭು, ಡಿಎಚ್‌ಓ ಶಂಕರ್ ನಾಯ್ಕ್ ಭೇಟಿ, ಪರಿಶೀಲನೆ ಮಾಡಿದ್ದಾರೆ.
ನೀರಿನ ಮೂಲಗಳ ಸ್ಯಾಂಪಲ್ ಪರಿಶೀಲನೆಗೆ ಅಧಿಕಾರಿಗಳು ಕಳಿಸಿದ್ದು, ತನಿಖೆ ಕೈಗೊಂಡಿದ್ದಾರೆ.