ರಾಮನಗರ : ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ತಾಲ್ಲೂಕಿನ ಬಿಡದಿ ಹೋಬಳಿಯ ಮಂಚ ಗ್ರಾಮ ಪಂಚಾಯಿತಿ ಪಿಡಿ ಯತ ಚಂದ್ರ ಹಾಗೂ ಚನ್ನಪಟ್ಟಣ ಮೈಲನಾಯಕ ಪಿಡಿಒ ಶಿಬಾ ನಿಖಾತ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಗ್ಗೆ ದಾಳಿ ನಡೆಸಿದರು.
ಚನ್ನಪಟ್ಟಣ ಮತ್ತು ಮೈಸೂರಿನಲ್ಲಿ ಮನೆಯಲ್ಲಿ ಯತೀಶ್ ₹ 20 ಕೋಟಿ ಅಧಿಕ ಆಸ್ತಿ. ಸದ್ಯ ಪತ್ನಿ ಹೆಸರಿನಲ್ಲಿ ಮೈಸೂರಿನಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗಲ್ಟನ್ ರೆಸಾರ್ಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಯತೀಶ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾಳಿಗೊಳಗಾದ ಯತೀಶ್ ಮತ್ತು ಶಿಬಾ ಇಬ್ಬರೂ ಒಂದೇ ಬ್ಯಾಚ್‌ನ ಪಿಡಿಒಗಳಾಗಿದ್ದಾರೆ. ಶಿಬಾ ಅವರೂ ಅಕ್ರಮವಾಗಿ ಆಸ್ತಿಯನ್ನು ಆರೋಪಿಸಿದ್ದಾರೆ, ಒಂದು ತಿಂಗಳಿನಿಂದ ಕರ್ತವ್ಯಕ್ಕೆ ಗೈ ಎಂಬ ಆರೋಪ ಕೇಳಿಬಂದಿದೆ.
ಮಂಚನಾಯಕನಹಳ್ಳಿ ರಾಜ್ಯದಲ್ಲೇ ಅತಿ ಹೆಚ್ಚು ತೆರಿಗೆ ವಸೂಲಿಯಾಗುವ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡು ವರ್ಷದಿಂದ ಇಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಇಲ್ಲ, ಅಲ್ಲಿ ಪಿಡಿಒ ಆಗಿರುವ ಯತೀಶ್ ಅವರ ಮನೆ ಹಾಗೂ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.