ಬೆಳಗಾವಿ :  ಜಿಲ್ಲೆ ರಾಮದುರ್ಗ ಪಟ್ಟಣದ ಹಲಗತ್ತಿ ಬೈಪಾಸ್ ರಸ್ತೆಯಲ್ಲಿರುವ ಅರಿಬೆಂಚಿ ಪಾರ್ಮಹೌಸ್‌ನಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಚಿಕ್ಕರೇವಣ್ಣ ನೇತೃತ್ವದಲ್ಲಿ ಏರ್ಪಡಿಸಿದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರ ಪಕ್ಷವೆಂದರೆ ಭಾರತೀಯ ಜನತಾ ಪಕ್ಷವಾಗಿದೆ. ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ರಾಮದುರ್ಗದಲ್ಲಿ ಹಿರಿಯರೊಬ್ಬರು ಗೆದ್ದವರು ಬೆಂಗಳೂರು ಸೇರಿದರು. ಬಿದ್ದವರು ಬೆಂಗಳೂರು ಸೇರಿದರೂ ಎಂದು ಹೇಳಿದ್ದಾರೆ. ಕರೋನಾ, ಪ್ರವಾಹದ ಸಂದರ್ಭದಲ್ಲಿ ನಾನು ಬಡವರ ಸೇವೆ ಮಾಡಿದ್ದೇನೆ. ಅವರು ಒಂದು ಗ್ಲಾಸ್ ನೀರು ಸಹ ಕೊಡಲು ಆಗಿಲ್ಲ ಎಂದು ಆರೋಪಿಸಿದರು.

ನಾನು ಸಮಾಜ ಸೇವೆ ಮಾಡಲು ರಾಮದುರ್ಗಕ್ಕೆ ಬಂದಿದ್ದೆ. ಆದರೆ ಭಾರತೀಯ ಜನತಾ ಪಕ್ಷ ನನ್ನ ಸೇವೆಯನ್ನು ಗುರುತಿಸಿ ಪಕ್ಷ ಟಿಕೇಟ್ ನೀಡಿತ್ತು. ಕೇವಲ 15 ದಿನಗಳಲ್ಲಿ ಸುಮಾರು 70 ಸಾವಿರ ಮತಗಳನ್ನು ನೀಡಿದ ರಾಮದುರ್ಗ ಮತಕ್ಷೇತ್ರದ ಮತದಾರರಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಬಿಜೆಪಿ ಮುಖಂಡ ಚಿಕ್ಕರೇವಣ್ಣ ಹೇಳಿದರು.

ನಾನು ಅನಾರೋಗ್ಯದ ನಿಮಿತ್ಯ ಬೆಂಗಳೂರಿನಲ್ಲಿದ್ದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮನೆಗೆ ಹೋಗಿ ತಾವು ಹಿರಿಯರು ತಮ್ಮ ನೇತೃತ್ವದಲ್ಲಿ ಚುನಾವಣೆ ಎದುರಿಸೋಣ ಎಂದು ಬೇಡಿಕೊಂಡರು ನಮ್ಮ ಜೊತೆಗೆ ಕೈ ಜೋಡಿಸದೇ ಪಕ್ಷಕ್ಕೆ ಮೋಸ… ಮಾಡಿ, ಬೇರೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ. ಅಂತರು ಮತ್ತೆ ಪಕ್ಷದ ನೇತೃತ್ವ ಬೇಡುವುದು ಎಷ್ಟು ಸರಿ ಎಂದು ಪರೋಕ್ಷವಾಗಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಚಿಕ್ಕರೇವಣ್ಣ ಟಾಂಗ್ ನೀಡಿದರು.

ನಾನು ಬಡವರ ಸೇವೆ ಮಾಡಿದ್ದೇನೆ. ಅವರು ಒಂದು ಗ್ಲಾಸ್ ನೀರು ಸಹ ಕೊಡಲು ಆಗಿಲ್ಲ ಎಂದು ಆರೋಪಿಸಿದರು.

ಮುಖಂಡರಾದ ಡಾ.ಕೆ.ವಿ. ಪಾಟೀಲ, ಬಿ.ಎಸ್. ಬೆಳವಣಕಿ, ದ್ಯಾವಪ್ಪ ಬೆಳವಡಿ, ರಮೇಶ ಅಣ್ಣಿಗೇರಿ. ಸಿದ್ದು ಮೇತ್ರಿ ಕೃಷ್ಣಾ ಲಮಾಣಿ ಸೇರಿದಂತೆ ಇತರರು ಮಾತನಾಡಿ, ಚಿಕ್ಕರೇವಣ್ಣ ನೇತೃತ್ವದಲ್ಲಿ ಲೋಕಸಭಾ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಸಂಜೀವ ಶೆಟ್ಟಿಸದಾವರ್ತಿ, ಐ.ಎಸ್. ಹರನಟ್ಟಿ, ಫಕೀರಪ್ಪ ರೊಟ್ಟಿ, ವಿಠಲ ಜಟಗನ್ನವರ, ತಿಪ್ಪಣ್ಣ ಕಂಬಳಿ, ಅಪ್ಪಾಸಿಗೌಡ ಪಾಟೀಲ, ಮುಹಮ್ಮದ್ ಬೇಗ ನಿಗದಿ, ಡಾ.ಬಸವರಾಜ ಮಾದನ್ನವರ, ಶ್ರೀದೇವಿ ಮಾದನ್ನವರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *