ನಿನ್ನೆ ಇಂದು ಬಂದ ಭುವಿಗೆ ವರುಣ
ಇಳೆಗೆ ಸೋತು ಬಂದ ಮಳೆರಾಯ
ಇದಕ್ಕಿನ್ನ ಮೊದಲೇ ಬರಬೇಕಿತ್ತಯ್ಯ
ಮರೆತಂಗಿದೆ ಕಣಯ್ಯ.
ಜೋರಾಗಿ ಬಂದು ಕೊಳೆಯ ತೊಳೆಯಯ್ಯ.
ಮನದ ಮಲೀನತೆಯು ಕೊಚ್ಚಿ ಹೋಗಲಿ
ಊರುಗಳೆಲ್ಲ ಹಸನಾಗಲಿ ರೋಗಗಳ
ಹಾವಳಿಯೂ ತಗ್ಗಲಿ.
ಪ್ರಕೃತಿಯು ಹಸಿರಾಗಿ ನಲಿಯಲಿ.
ಯಾವ ಭೇದ ಭಾವವಿರದೆ ಬರುವೆ ನೀನು
ಎಲ್ಲ ಕಡೆಗೂ ಸುರಿದು ಬಿಡು ಬಂದು ಇನ್ನು.
===========================
ಕಲ್ಪನಾ ಎಸ್ ಪಾಟೀಲ