ಮೈ ಕೊಡವಿ ಮೇಲೆಳುತಿದೆ
ಬಿತ್ತಿದ ಬೀಜ ಮೊಳಕೆಯೊಡೆದಿದೆ
ಭೂಮಿಯ ಆಳದೊಳಗಿಳಿದಿದೆ
ಹಸಿರಿನೊಂದಿಗೆ ಉಸಿರು ನೀಡಿದೆ.
ಮಣ್ಣ ಕಣ ಕಣದಲ್ಲಿನ ಸಾರವ ಹೀರುತ
ಬೆಳೆಯುವ ಸಿರಿ ಮೊಳಕೆಯಲ್ಲಿ ಅನವರತ
ಸಸಿಯಾಗಿ ಸದೃಢವಾಗಿ ಬೆಳೆಯುತ
ನೀನೊಂದು ಸಮೃದ್ಧಿಯ ಸಂಕೇತ.
ಹಸಿರಿಗೆ ಭೂರಮೆಯೆ ಆಸರೆ
ನಾವೆಲ್ಲರೂ ಇರುವೆವು ನೀನಿದ್ದರೆ
ರೈತ ಸಂಪೂರ್ಣ ನಿನ್ನನೇ ನಂಬಿರೆ
ಎಳೆಯದಿರವನ ಹೊಟ್ಟೆಯ ಮೇಲೆ ಬರೆ.
ನೀನು ನಿಸರ್ಗದ ಅದ್ಭುತವೆ
ನೀರೆರೆಯಲು ಬೇರು ಬಿಡುವೆ
ಮೊಳಕೆಯಲ್ಲೇ ಫಲವತ್ತತೆಯನು ತೋರುವೆ
ಬೆಳೆದು ನಿಂತಾಗ ಫಲವ ಕೊಡುವೆ.
=========================
✍🏻 ಕಲ್ಪನಾ ಎಸ್ ಪಾಟೀಲ