ಶಿಕ್ಷಿತರಾಗಲು ಮುಂದೆ ಬನ್ನಿ
ನಾಲ್ಕಕ್ಷರ ಕಲಿಯಲು ಬನ್ನಿ
ಜ್ಞಾನವ ಗಳಿಸಿ ಅಜ್ಞಾನವಳಿಯೋಣ ಬನ್ನಿ
ಎಲ್ಲರೂ ಸಾಕ್ಷರರಾಗೋಣ ಬನ್ನಿ.
ಶಿಕ್ಷಣವೇ ಬಾಳಿಗೆ ಶಕ್ತಿ ನೀಡುವುದು
ಕತ್ತಲೆಯಲು ಬೆಳಕು ಕಾಣುವುದು
ಸಾಕ್ಷರನಾದವನ ಬದುಕ ಹಸನಾಗಿಸುವುದು
ಅನಾಗರಿಕನ ವರ್ತನೆಯ ಸಹಿಸದು.
ಶಿಕ್ಷಣವೇ ಆಗಿಹುದು ನಮಗೆಲ್ಲ ಸಂಪತ್ತು
ಅದ ನಂಬಿದರೆ ಇಲ್ಲ ಆಪತ್ತು
ಕಷ್ಟ ಕಾಲದಲ್ಲಿ ಕೈಹಿಡಿವ ಹೊತ್ತು
ಸಾಕ್ಷರತೆಯಿಂದಲೇ ಸಾಕ್ಷಾತ್ಕಾರದ ಬದುಕ ಸಾಗಿತ್ತು.
ಅಕ್ಷರವ ತಿದ್ದುತ ಓದು ನೀ ತಿಳಿಯುತ
ಧೈರ್ಯದಿ ಪರೀಕ್ಷೆಗಳನು ಎದುರಿಸುತ
ಅರಿವೆ ಗುರುವೆಂದು ತಲೆ ಬಾಗುತ
ಒಳ್ಳೆಯ ನಾಗರಿಕನಾಗಿ ಬೆಳೆಯುತ.
ಜ್ಞಾನವಂತನಾಗು ಕಲಿತು ಕಲಿಸು
ಅಹಂಕಾರಿಯಾಗದಿರು ಅಜ್ಞಾನವ ನೀಗಿಸು
ಮಾದರಿಯಾಗು ಜ್ಞಾನ ಜ್ಯೋತಿಯ ಹೊತ್ತಿಸು
ಅಂಧಕಾರದೊಳಿರುವವರ ಬಾಳು ಬೆಳಗಿಸು.
===========================
✍🏻 ಕಲ್ಪನಾ ಎಸ್ ಪಾಟೀಲ