ಶಿವಮೊಗ್ಗ: ಗಾಂಜಾ ಸಾಗಾಟ ಮಾಡುವ ವೇಳೆ ಭದ್ರಾವತಿ ಹೊಸಮನೆ ಪೊಲೀಸರು ದಾಳಿ ನಡೆಸಿ 4.5 ಲಕ್ಷ ರೂ. ಮೌಲ್ಯದ 7 ಕೆಜಿ ಗಾಂಜಾವನ್ನು ಮತ್ತು ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ  ಭದ್ರಾವತಿ ನಗರದ ಹೊಸಮನೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸತ್ಯ ಸಾಯಿ ನಗರದ ಕಡೆಗೆ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ‌ ನಡೆಸಿದರು.

ಭದ್ರಾವತಿ ಡಿವೈಎಸ್ಪಿ ನಾಗರಾಜ್ ಸಿಪಿಐ ಶ್ರೀಶೈಲ ಕುಮಾರ್, ಹೊಸಮನೆ ಪಿಐ ಕೃಷ್ಣ ಕುಮಾರ್ ಬಿ ಮಾನೆ ಹಾಗೂ ಸಿಬ್ಬಂದಿಗಳ ತಂಡವು  ದಾಳಿ ನಡೆಸಿದೆ.‌ ಗಾಂಜಾ ಸಾಗಾಟ ಮಾಡುತ್ತಿದ್ದ ಹುಸೇನಾಬಿ  (35)  ವಶಕ್ಕೆ ಪಡೆದು ಅಂದಾಜು ಮೌಲ್ಯ 4,50,000 – ರೂ ಗಳ 7 ಕೆಜಿ 590 ಗ್ರಾಂ ಒಣ ಗಾಂಜಾವನ್ನು ಅಮಾನತುಪಡಿಸಿಕೊಳ್ಳಲಾಗಿದೆ

Leave a Reply

Your email address will not be published. Required fields are marked *