ಮೈಸೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಹೋರಾಟಕ್ಕೆ ಮುಂದಾಗಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು ವಿಡಿಯೋದಲ್ಲಿರುವ ಸಂತ್ರಸ್ಥೆ ಮಹಿಳೆಯ ಮಗ ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ತನ್ನ ತಾಯಿಯನ್ನು ಅಪಹರಿಸಿದ್ದಾರೆ ಎಂದು HD ರೇವಣ್ಣ ವಿರುದ್ಧ ಅಪಹರಣ ಕೇಸ್ ದಾಖಲಿಸಿದ್ದಾನೆ.
ರೇವಣ್ಣ ವಿರುದ್ಧ ಮಹಿಳೆಯ ಅಪಹರಣ ಮಾಡಿರುವ ಆರೋಪ ಕೇಳಿಬಂದಿದ್ದು, ಐಪಿಸಿ ಸೆಕ್ಷನ್ 364/ಅ, 365, ಹಾಗೂ 34 ಅಡಿಯಲ್ಲಿ ಮೈಸೂರಿನ ಕೆ.ಆರ್ ನಗರದಲ್ಲಿ ಪ್ರಕರಣ ದಾಖಲಾಗಿದೆ. ಅಪಹರಣಕ್ಕೆ ಒಳಗಾದ ಮಹಿಳೆಯನ್ನು ಎಚ್ ಡಿ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಎಂದು ಹೇಳಲಾಗುತ್ತಿದೆ. ಹೊಳೆನರಸೀಪುರದ ಚೆನ್ನಂಬಿಕ ಥಿಯೇಟರ್ ಪಕ್ಕ ಇರುವ ಮನೆ ಎಂದು ಹೇಳಲಾಗುತ್ತಿದೆ.
ದೂರಿನಲ್ಲಿ ಏನಿದೆ?
ಈ ಕುರಿತಂತೆ ಸಂತ್ರಸ್ತೇ ಮಹಿಳೆಯ ಮಗ ದೂರಿನಲ್ಲಿ ವಿವರಿಸಿದ್ದು, ನನ್ನ ಸ್ನೇಹಿತರ ಬಳಿ ವಿಡಿಯೋ ಬಗ್ಗೆ ಮಾಹಿತಿ ಸಿಕ್ಕಿತ್ತು. ನಿನ್ನ ತಾಯಿಯನ್ನು ಕೈ ಕಾಲು ಕಟ್ಟಿ ಬಲಾತ್ಕಾರ ಮಾಡಿದ್ದಾರೆ.ಈ ಬಗ್ಗೆ ದೊಡ್ಡ ಕೇಸ್ ಆಗಿರುವುದಾಗಿ ನನಗೆ ತಿಳಿಸಿದರು. ನಾನು ರಾತ್ರಿ ಫೋನ್ ಮಾಡಿ ನನ್ನ ತಾಯಿ ಬಗ್ಗೆ ವಿಚಾರಿಸಿದೆ. ಚುನಾವಣೆ ದಿನ ಬೆಳಗ್ಗೆ ತಾಯನ್ನು ಕರೆತಂದು ಬಿಟ್ಟರು.
ನನ್ನ ತಂದೆ ತಾಯಿಗೆ ಪೊಲೀಸ್ ಬಂದರೆ ಏನು ಹೇಳಬೇಡಿ ಅವರಿಗೆ ಸಿಗಬೇಡಿ.ನಿಮ್ಮ ಮೇಲೆ ಕೇಸ್ ಆಗುತ್ತೆ ಎಂದಿದ್ದರು.ಅಂದರೆ ತಿಳಿಸಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದರು ಎಪ್ರಿಲ್ 29ರಂದು ಒತ್ತಾಯ ಮಾಡಿ ಕರೆದುಕೊಂಡ ಹೋಗಿದ್ದರು. ದಯವಿಟ್ಟು ನನ್ನ ತಾಯಿಯನ್ನು ಹುಡುಕಿಕೊಡಿ ಎಂದು ದೂರಿನಲ್ಲಿ ಮಹಿಳೆಯ ಮಗ ತಿಳಿಸಿದ್ದಾನೆ