ಹಾಸನ: ಅತಿಥಿ ಉಪನ್ಯಾಸಕಿ (Guest lecturer) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣದ ಗಾಯಿತ್ರಿ ಬಡಾವಣೆಯಲ್ಲಿ ನಡೆದಿದೆ. 34 ವರ್ಷದ ದೀಪಾ ಆತ್ಮಹತ್ಯೆಗೆ ಶರಣಾದ ನತದೃಷ್ಟೆಯಾಗಿದ್ದಾರೆ. ಆತ್ಮಹತ್ಯೆಗೆ ಶರಣಾದ 34 ವರ್ಷದ ದೀಪಾಗೆ ಮದುವೆ (Marriage) ಆಗಿರ್ಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಮೃತರು ಚನ್ನರಾಯಪಟ್ಟಣ ಸರ್ಕಾರಿ ಕಾಲೇಜಿನಲ್ಲಿ (Govt College) ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ (Channapatna Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುಗಿಲು ಮುಟ್ಟಿದ ಅಕ್ರಂದನ

ಮೃತ ದೀಪಾ, ಸೋಮಶೇಖರ್ ಹಾಗೂ ಭಾಗ್ಯ ದಂಪತಿ ಪುತ್ರಿಯಾಗಿದ್ದು, ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಅಂತ ತಿಳಿದು ಬಂದಿಲ್ಲ. ಮೃತರ ಸಹೋದರ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ನ್ಯಾಯಾಧೀಶರ ಎದುರು ಮತ್ತೆ ಒಂದಾದ ಜೋಡಿಗಳು

ಸಣ್ಣಪುಟ್ಟ ಮನಸ್ತಾಪಗಳಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮೂವರು ದಂಪತಿಗಳನ್ನ (Couple) ಬೀದರ್‌ನ ಸಿವಿಲ್ ನ್ಯಾಯಾಧೀಶರ ಕೋರ್ಟ್ (Court) ಒಂದುಗೂಡಿಸಿದೆ. ಒಂದೆರಡು ತಿಂಗಳ ಅವಧಿಯಲ್ಲಿ ಬೀದರ್ ತಾಲೂಕಿನ ಮೂರು‌ ಪ್ರತ್ಯೇಕ ದಂಪತಿಗಳು, ಮನೆಯಲ್ಲಿ‌ ಪತಿ (Husband) ಕುಡಿದು ಗಲಾಟೆ ಮಾಡ್ತಾರೆ ಅಂತಾ ಕೌಟುಂಬಿಕ ಕಲಹದ ದೂರು ದಾಖಲಿಸಲು ನಗರದ ಮಹಿಳಾ ಪೊಲೀಸ್ ಠಾಣೆ (Woman Police Station) ಮೆಟ್ಟಿಲೇರಿದ್ದರು. ಆದರೆ, ಮಹಿಳಾ ಠಾಣೆ ಪೊಲೀಸರು ರಾಜಿ ಸಂಧಾನಕ್ಕಾಗಿ ಮೂವರು ದಂಪತಿಗಳ ಅರ್ಜಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಿದ್ದರು.

ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಕೆ.ಕನಕಟ್ಟೆ, ನೋಟಿಸ್ ಜಾರಿಮಾಡಿ ಸದರಿ ಮೂವರು ದಂಪತಿಗಳನ್ನು ಪ್ರಾಧಿಕಾರಕ್ಕೆ ಕರೆಯಿಸಿದ್ದಾರೆ. ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿದ್ದಾರೆ. ದಂಪತಿಗಳಿಗೆ ಕಾನೂನಾತ್ಮಕ ವಿಚಾರಗಳನ್ನು ತಿಳಿಸಿ ಮನಪರಿವರ್ತನೆಗೊಳಿಸಿದ್ದಾರೆ. ಬಳಿಕ ಮಾಲೆ ಬದಲಾಯಿಸುವ ಮೂಲಕ ದಂಪತಿಗಳನ್ನ ಒಂದುಗೂಡಿಸಿ ಪರಸ್ಪರ ಹೂಮಾಲೆ ಹಾಕಿ ಸಿಹಿ ತಿನ್ನಿಸುವ ಮೂಲಕ ದಂಪತಿಗಳನ್ನು ಒಂದು ಮಾಡಿದ್ದಾರೆ.

Leave a Reply

Your email address will not be published. Required fields are marked *