ವದೆಹಲಿ, ಮೇ 13: ಭಾರತದಲ್ಲಿ ಮತ್ತೆ ಕೊರೊನಾ ಆತಂಕ ಆರಂಭವಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಪಂಚಾದ್ಯಂತ ತನ್ನ ಕಬಂಧ ಬಾಹು ಚಾಚಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಕೊರೊನಾ ಇದೀಗ ಮತ್ತೆ ಭಾರತದಲ್ಲಿ ಹರಡಲು ಆರಂಭಿಸಿದೆ. ಕೊರೊನಾ ರೂಪಾಂತರ ತಳಿ ವೈರಸ್‌ಗಳು ಬಹಳ ವೇಗವಾಗಿ ಹರಡುತ್ತಿದೆ ಎಂದು ವರದಿಯಾಗಿದೆ.

ವಿದೇಶಗಳಲ್ಲಿ ಈಗಲೂ ಕೊರೊನಾ ಹಾವಳಿ ಇದ್ದು, ಭಾರತ ಬಹುತೇಕ ಕೊರೊನಾ ಮುಕ್ತ ದೇಶವಾಗಿತ್ತು. ಇದೀಗ ಮತ್ತೆ ವೈರಸ್‌ ಹರಡುತ್ತಿದ್ದು, ಆತಂಕ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಓಮಿಕ್ರಾನ್​ನ ಮತ್ತೊಂದು ತಳಿಯ ವೈರಸ್‌ ಹರಡುತ್ತಿದ್ದು, ಈ ವೈರಸ್‌ ಅಮೆರಿಕದಲ್ಲಿ ಅತಿ ವೇಗವಾಗಿ ಹರಡುತ್ತಿದೆ ಎನ್ನುವ ಮಾಹಿತಿ ಇದೆ.

ಜನವರಿಯಲ್ಲಿ ಈ ಹೊಸ ವೈರಸ್‌ ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಇದೀಗ ಮಹಾರಾಷ್ಟ್ರದಲ್ಲಿಯೂ ಹರಡುತ್ತಿದ್ದು, ಈಗಾಗಲೇ ಬರೋಬ್ಬರಿ 91 ಪ್ರಕರಣಗಳು ದಾಖಲಾಗಿದೆ. ಪುಣೆಯಲ್ಲಿ 51 ಪ್ರಕರಣ, ಥಾಣೆಯಲ್ಲಿ 20 ಪ್ರಕರಣಗಳ, ಔರಂಗಾಬಾದ್, ಅಮರಾವತಿಯಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದರೆ, ಸೋಲಾಪುರದಲ್ಲಿ 2 ಪ್ರಕರಣ, ಅಹಮ್ಮದ್‌ನಗರ, ನಾಸಿಕ್, ಲಾತೂರ್ ಹಾಗೂ ಸಾಂಗ್ಲಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಕೊರೊನಾ ಹೊಸ ವೈರಸ್‌ ಓಮಿಕ್ರಾನ್ ಸಬ್‌ವೇರಿಯಂಟ್ ಕೆ.ಪಿ-೨( KP.2) ಅತೀ ವೇಗವಾಗಿ ಹರಡುತ್ತಿದ್ದು, ಹಿಂದಿನ ವೈರಸ್‌ಗಿಂತ ಇದು ಶಕ್ತಿಶಾಲಿಯಾಗಿದೆ. ಆದರೆ ಮನುಷ್ಯನ ದೇಹದ ಮೇಲೆ ಇದರ ಪರಿಣಾಮ ಕಡಿಮೆ ಇದ್ದು, ಸೋಂಕಿಗೊಳಗಾದವರು ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಮಾಣ ಕಡಿಮೆ ಇದೆ ಎನ್ನಲಾಗಿದೆ.

Leave a Reply

Your email address will not be published. Required fields are marked *