ಬೆಂಗಳೂರು: ಸ್ಯಾಂಡಲ್ ವುಡ್ ಯುವನಟ ಚೇತನ್ ಚಂದ್ರ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಭಾನುವಾರ ರಾತ್ರಿ(ಮೇ.12 ರಂದು) ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಅವರು ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಬಂದು ಮಾಹಿತಿ ನೀಡಿದ್ದಾರೆ.
ಹಲ್ಲೆಗೊಳಗಾದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋದ ನಟ ಚೇತನ್ ಅವರಿಗೆ ಪೊಲೀಸರು ಮೊದಲು ಚಿಕಿತ್ಸೆ ಪಡೆದು ಬನ್ನಿ ಎಂದಿದ್ದಾರೆ. ಆಸ್ಪತ್ರೆಯಲ್ಲಿ ನಟ ಇನ್ಸ್ಟಾಗ್ರಾಮ್ ಲೈವ್ ಮಾಡಿ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ದೇವಸ್ಥಾನಕ್ಕೆ ಹೋಗಿ ಬರುವ ಕನಕಪುರ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಗಳು ಚೇತನ್ ಅವರ ಕಾರನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದಾರೆ ಎಂದು ಸ್ವತಃ ಚೇತನ್ ಅವರೇ ಮಾಹಿತಿ ನೀಡಿದ್ದಾರೆ.
ನನ್ನ ಗಾಡಿಯನ್ನು ಅಡ್ಡಹಾಕಿ ನನ್ನನ್ನು ಹೊಡೆದರು. ಯಾಕೆ ಗಾಡಿ ಅಡ್ಡ ಹಾಕಿದ್ರು ಅಂಥ ಗೊತ್ತಿಲ್ಲ. ನಾವು ಇಳಿದು ಅವರ ಮೇಲೆ ಕೈ ಮಾಡಿದಾಗ. ಏನಿಲ್ಲಾ ಅಂದ್ರು ಒಂದು 20 ಜನ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಅಪ್ಪ – ಅಮ್ಮ ನೋಡ್ತಾ ಇರುತ್ತಾರೆ. ಇವತ್ತು ಮದರ್ಸ್ ಡೇ ಬೇರೆ. ನನ್ನ ಅಮ್ಮನನ್ನು ಹೊರಗಡೆ ಕರ್ಕೊಂಡು ಹೋಗಿದ್ದೆ. ದೇವಸ್ಥಾನಕ್ಕೆ ಬಂದು ವಾಪಾಸ್ ಆದಾಗ ಈ ಘಟನೆ ನಡದಿದೆ. ನನ್ನ ಹೆಂಡತಿ, ಪಾಪು ನನ್ನ ನೋಡ್ತಾ ಇರುತ್ತಾರೆ. ಹೆದರಬೇಡಿ ಐಯಾಮ್ ಫೈನ್ ಎಂದಿದ್ದಾರೆ.
ಚೆನ್ನಾಗಿ ಕುಡಿದು ಬೇಕಂತ ನಮ್ಮ ಗಾಡಿಗೆ ಢಿಕ್ಕಿ ಹೊಡೆದು, ನಾನು ಸ್ಲೋ ಮಾಡಿದ್ರು ಗಾಡಿ ನಿಲ್ಲಿಸಿಲ್ಲ. ಅವರ ಜಾಗದಲ್ಲಿ ಗಾಡಿ ನಿಲ್ಲಿಸಿದಾಗ, ನಾವು ದರೋಡೆ ಮಾಡೋಕೆ ಬಂದವರು ಅನ್ಕೊಂಡು, ಅವರ ಮೇಲೆ ಹಲ್ಲೆಗೆ ಮಾಡಲು ಹೋದಾಗ, ಅವರ ಕಡೆಯವರು ಬಂದರು. ಅದರಲ್ಲಿ ಹುಡುಗಿಯೊಬ್ಬಳು ಬಂದು ನನ್ನ ಮೇಲೆ ಕೈ ಮಾಡಿದ್ಳು ಅಂಥ ಹೇಳಿದ್ದಾಳೆ. ಅಫೀಷಿಯಲ್ ಆಗಿ ಇರ್ತೀರಾ, ಹಾಗೆ ಇರಿ, ಯಾಕೆ ಅಡ್ಡ ಹಾಕಬೇಕು, ಹೊಡೆಯಲು ಬರಬೇಕು ಎಂದು ಹೇಳಿದ್ದಾಳೆ. ನಮ್ಮಗೇನು ಗೊತ್ತು ನಾವು ಅವರು ದರೋಡೆ ಮಾಡೋಕೆ ಬಂದವರು ಅನ್ಕೊಂಡೀವಿ ಎಂದು ಚೇತನ್ ಹೇಳಿದ್ದಾರೆ.
ಅವರ ಕಡೆಯವರು ಎಲ್ಲರೂ ಪೊಲೀಸ್ ಸ್ಟೇಷನ್ ಬಳಿ ಬಂದಿದ್ದಾರೆ. ಕಾರಿಗೆ ಹಾನಿ ಮಾಡಿದ್ದಾರೆ. ಆದರೆ ಅವನು ಮಾತ್ರ ಬಂದಿಲ್ಲ ಎಂದಿದ್ದಾರೆ.
ಸದ್ಯ ನಟ ಪೊಲೀಸ್ ಕೇಸ್ ದಾಖಲಿಸಿದ್ದಾರೆ.
‘ಪ್ರೇಮಿಸಂ’, ‘ರಾಜಧಾನಿ’, ‘ಪ್ಲಸ್’, ‘ಜಾತ್ರೆ’ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಚೇತನ್ ಚಂದ್ರ ನಟಿಸಿದ್ದಾರೆ.