ವಿಜಯಪುರ : ಇತ್ತೀಚಿಗೆ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ವಿಜಯಪುರದಲ್ಲಿ ತಡರಾತ್ರಿ ಯುವಕನ ಭೀಕರ ಕೊಲೆ, ದುಷ್ಕರ್ಮಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿರುವ ಘಟನೆ ನಗರದ ಎಪಿಎಂಸಿ ಮೇಕೆ ಹಾಗೂ ಕುರಿ ಮಾರುಕಟ್ಟೆ ಬಳಿ ನಡೆದಿದೆ.
ಕೊಲೆಯಾದ ಯುವಕನನ್ನು ರೋಹಿತ್ ವಸಂತ್ ಪವಾರ್ (23) ಎಂದು ಸೂಚಿಸಿದರು. ವಿಜಯಪುರ ನಗರದ ಕಂಬಾರ ಓಣಿ ನಿವಾಸಿ ರೋಹಿತ್ನನ್ನು ದುಷ್ಕರ್ಮಿಗಳು ಕೊಲೆಗೈದು ಮುಳ್ಳುಕಂಟಿಯಲ್ಲಿ ಶವ ಬಿಸಾಡಿದ್ದಾರೆ. ಘಟನಾ ಸ್ಥಳದಲ್ಲಿ ಬಿಯರ್ ಬಾಟಲ್ ಮತ್ತು ಚಿಪ್ಸ್ ಪ್ಯಾಕೆಟ್ ಇದೆ. ಮೃತನ ಪರಿಚಯಸ್ಥರಿಂದಲೇ ಕೊಲೆ ನಡೆದಿರುವ ಶಂಕೆಯನ್ನು ಮೃತನ ಕುಟುಂಬ ಆರೋಪಿಸಿದೆ.
ಮೇಲ್ನೋಟಕ್ಕೆ ಈ ಯುವಕನ ಪರಿಚಯಸ್ಥರಿಂದಲೇ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.ರೋಹಿತ್ ಕೊಲೆಯ ಬಗ್ಗೆ ಆತನ ಸ್ನೇಹಿತ ಖಾಲಿಯಾದ ಇನಾಂದಾರ್ ನಿಮ್ಮ ಮಗನ ಕೊಲೆಯಾಗಿದೆ ಎಂದು ಕುಟುಂಬಸ್ಥರೆಲ್ಲರೂ ಗಾಬರಿಯಾಗಿ ಎಲ್ಲ ರೋಹಿತ್ ಗಾಗಿ ಹುಡುಕಾಡಿದ್ದಾರೆ.ಖಾಲೀದ್ ಮನೆಗೆ ಹೋದರೂ ಖಾಲಿದ್ ಆಗಲಿ ರೋಹಿತ್ ಅವರ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ನಂತರ ರೋಹಿತ್ ಗಾಗಿ ಹುಡುಕಾಡಿದಾಗ ಆತನ ಶವ ಎಪಿಎಂಸಿ ಕಂಡು ಬಂದಿದೆ. ತಕ್ಷಣ ಎಪಿಎಂಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.