ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ ವೈದ್ಯರು ಶಾಕ್
ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ವ್ಯಕ್ತಿಯೋರ್ವ ಆಸ್ಪತ್ರೆಗೆ ಆಗಮಿಸಿದ ಘಟನೆ ಬೆಳಗಾವಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿ ವ್ಯಕ್ತಿಯನ್ನು ನೋಡಿ ಕೆಲಕಾಲ ಆತಂಕಗೊಂಡರು. ಬೆಳಗಾವಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದ ಶಾಹೀದ್ ಎಂಬ ವ್ಯಕ್ತಿ ಮನೆಯ ಮುಂದೆ ಬಂದಿದ್ದ ಹಾವನ್ನು ಹಿಡಿದು ಅರಣ್ಯಕ್ಕೆ ಬಿಡಲು ಹೋದಾಗ ಹಾವು ಕಚ್ಚಿದೆ. ಅದನನ್ನು ಹಿಡಿದು ಆಸ್ಪತ್ರೆಗೆ ತಂದಿದ್ದಾನೆ.