ಕೋಲಾರ : ಜಿಲ್ಲೆಯ ಮಾಲೂರು ತಾಲೂಕಿನ ತೊರ್ನಹಳ್ಳಿ ಗ್ರಾಮ ಪಂಚಾಯಿತಿಯ ಭ್ರಷ್ಟಾಚಾರ ಎಸಗಿದೆ ಎನ್ನಲಾಗುವ ಶಂಕೆ ಹೊಂದಿರುವ ಕಡತಗಳು ಲೋಕಾಯುಕ್ತ ಕೈ ಸೇರಿವೆ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನ ಕುರಿತು ಎಡಗಿನ ಮೇಲೆಯ ರ್‌ಟಿಐ ಕಾರ್ಯಕರ್ತರಾದ ಮೋಹನ್ ಎನ್ ರವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪದೋಷ ಹಿನ್ನೆಲೆ
ಲೋಕಾಯುಕ್ತ ಮೊರೆ ಹೋದ ಆರ್‌ಟಿಐ ಕಾರ್ಯಕರ್ತ ಎಡಗಿನ ಬೆಲೆಯ ಮೋಹನ್ ಎನ್
ಮಾಹಿತಿ ಹಕ್ಕು ಕಾಯ್ದೆ ಅಡಿ ತೋರ್ನಹಳ್ಳಿ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿ ಅರ್ಜಿ ಸಲ್ಲಿಸಿದರು ಉಡಾಫೆಯ ಉತ್ತರ ಸಿಗುತ್ತದೆ ಯಾವುದೇ ಮಾಹಿತಿ ಅರ್ಜಿಗೂ ಸೂಕ್ತ ಮಾಹಿತಿಯನ್ನು ನೀಡದೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಿರುತ್ತಾರೆ ಎನ್ನಲಾಗಿದೆ
ಹೆಡಗಿನ ಬೆಲೆ ಗ್ರಾಮದ ಎನ್‌ಸಿ ಕಾಲೋನಿ ವೆಂಕಟೇಶಪ್ಪನ ಮನೆಯಿಂದ ಲಕ್ಷ್ಮಿ ನಾರಾಯಣಪ್ಪನ ಮನೆಯವರೆಗು ಚರಂಡಿ ಮತ್ತು ಚಪ್ಪಡಿ ಹಾಸಿರುವ ಕಾಮಗಾರಿಯು ಕಳಪೆ ಕಾಮಗಾರಿಯಾಗಿದ್ದು ಮತ್ತು ಹಣ ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು
ಈ ಕಾಮಗಾರಿಗೆ ಸಂಬಂಧಿಸಿದಂತೆ 1 ಲಕ್ಷ ರು ಬಿಲ್ ವರದಿ ಮಾಡಿ ಅಕ್ರಮವಾಗಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ
ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ಪರಿಪಾಲನೆ ಮಾಡಬೇಕಾದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಣ ದುರುಪಯೋಗ ಮಾಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆ
ರ್‌ಟಿಐ ಕಾರ್ಯಕರ್ತರಾದ ಮೋಹನ್ ಎನ್ ರವರು ಲೋಕಾಯುಕ್ತಕ್ಕೆ ದೂರು ನೀಡಿದ್ದು ತನಿಕೆಯ ನಂತರ ಸತ್ಯಾಂಶ ತಿಳಿದು ಬರಬೇಕಾಗಿದೆ.
ಒಂದು ವೇಳೆ ಇಂತಹ ಭ್ರಷ್ಟಾಚಾರ ನಡೆದಿದ್ದ ಪಕ್ಷದಲ್ಲಿ ಅಧಿಕಾರಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸ್ಥಳೀಯರು ಕೂಡ ಆಗ್ರಹಿಸಿದ್ದಾರೆ