ನವದೇಹಲಿ : ಬಿಜೆಪಿ ನೇತೃತ್ವದ ಎನ್‌ಡಿ ಸರ್ಕಾರವು ಜೂನ್ 9 ರಂದು ಪ್ರಮಾಣ ವಚನ ಸಮಾರಂಭಕ್ಕೆ ಸಿದ್ದತೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಾಯಕರ ಹೆಸರುಗಳ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಈ ಬಾರಿ ಕರ್ನಾಟಕದಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನ ಎಂಬ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಲಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್ ಜೆಡಿಎಸ್‌ನಿಂದ ಎಚ್‌ಡಿ ಕುಮಾರಸ್ವಾಮಿ ಬೆಂಬಲದೊಂದಿಗೆ ನರೇಂದ್ರ ಮೋದಿ ಆಡಳಿತ ಶುರು. ಆದರೆ, ಸರ್ಕಾರ ರಚನೆಗೂ ಮುನ್ನವೇ ಸಂಪುಟ ಸೇರಲು ಸಚಿವಾಕಾಂಕ್ಷಿಗಳು ಲಾಬಿ ಜೋರಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಪಡೆಯಲು ಸಾಧ್ಯವಾಗಿದ್ದರೂ, ಗೃಹ, ಹಣಕಾಸು ಮತ್ತು ರಕ್ಷಣಾ ಸಚಿವಾಲಯದಂತಹ ದೊಡ್ಡ ಸಚಿವಾಲಯಗಳನ್ನು ತನ್ನ ನಾಯಕರಿಗೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಮಿತ್ರ ಪಕ್ಷಗಳ ಬೇಡಿಕೆಯಿಂದಾಗಿ ಬಿಜೆಪಿ 4:1 ಸೂತ್ರವನ್ನು ತಂದಿದ್ದು, ಈ ಸೂತ್ರದ ಪ್ರಕಾರ ಒಂದು ಪಕ್ಷವು ಪ್ರತಿ ನಾಲ್ಕು ಸಂಸತ್ ಸದಸ್ಯರಿಗೆ ಒಬ್ಬ ಕ್ಯಾಬಿನೆಟ್ ಮಂತ್ರಿಯನ್ನು ಪಡೆಯುತ್ತದೆ, ಗೃಹ , ರಕ್ಷಣಾ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಪ್ರಮುಖ ಸಚಿವಾಲಯಗಳನ್ನು ಬಿಜೆಪಿ ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮೋದಿ 3.0 ಸರ್ಕಾರದ ಕ್ಯಾಬಿನೆಟ್ ಮಂತ್ರಿಗಳ ಪಟ್ಟಿ
* ಅಮಿತ್ ಶಾ: ಗೃಹ ಸಚಿವಾಲಯ
* ರಾಜನಾಥ್ ಸಿಂಗ್ : ರಕ್ಷಣಾ ಸಚಿವಾಲಯ
* ನಿರ್ಮಲಾ ಸೀತಾರಾಮನ್: ಹಣಕಾಸು ಸಚಿವಾಲಯ
* ಸುಬ್ರಮಣ್ಯಂ ಜೈಶಂಕರ್: ವಿದೇಶಾಂಗ ವ್ಯವಹಾರಗಳ ಸಚಿವಾಲಯ
* ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
* ಪಿಯೂಷ್ ಗೋಯಲ್: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
* ಅಶ್ವಿನಿ ವೈಷ್ಣವ್: ಸಚಿವಾಲಯ
* ಅನುಪ್ರಿಯಾ ಸಿಂಗ್ ಪಟೇಲ್
* ಸ್ಮೃತಿ ಜುಬಿನ್ ಇರಾನಿ
* ಶಿವರಾಜ್ ಸಿಂಗ್ ಚೌಹಾಣ್
* ಜ್ಯೋತಿರಾದಿತ್ಯ ಸಿಂಧಿಯಾ
* ಅರ್ಜುನ್ ಮುಂಡ
* ಹರ್ದೀಪ್ ಸಿಂಗ್ ಪುರಿ
* ಅನುರಾಗ್ ಠಾಕೂರ್
* ಪುರುಷೋತ್ತಮ್ ರೂಪಾಲಾ
* ಪ್ರಹ್ಲಾದ್ ಜೋಶಿ
* ನರೇಂದ್ರ ಸಿಂಗ್ ತೋಮರ್
* ಗಿರಿರಾಜ್ ಸಿಂಗ್
* ಚಿರಾಗ್ ಪಾಸ್ವಾನ್
* ಲಾಲ್ಲನ್ ಸಿಂಗ್
* ಅನುಪ್ರಿಯಾ ಪಟೇಲ್
* ಜೀತನ್ ರಾಮ್ ಮಾಂಝಿ
* ಹೆಚ್ ಡಿ ಕುಮಾರಸ್ವಾಮಿ