ಕೆರೂಡಿ ಆಸ್ಪತ್ರೆಯಲ್ಲಿ ಬೃಹತ್ ಗಾತ್ರದ ಕಲ್ಲನ್ನು ಆಪರೇಷನ್ ಮೂಲಕ ಯಶಸ್ವಿಯಾಗಿ ಹೊರತೆಗೆದ ಕಿಡ್ನಿ ಹಾಗೂ ಮೂತ್ರರೋಗ ಶಸ್ತ್ರಚಿಕಿತ್ಸಕರಾದ ಡಾ! ದೇವೇಂದ್ರ ಜಲ್ದೆ.

ಹೌದು ವೀಕ್ಷಕರೇ ಬಾಗಲಕೋಟೆಯ ಜಿಲ್ಲೆಯ ಕಲಾದಗಿಯ 70 ವಯಸ್ಸಿನ ಸತ್ತರಸಾಬ.ರಾನುಸಾಬ. ಬಿದರೇಕರ ಎನ್ನುವ ವ್ಯಕ್ತಿಯ ಹೊಟ್ಟೆನೋವಿನಿಂದ ಸುಮಾರು ಎರಡು ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದನು..

ಹೊಟ್ಟೆಯಲ್ಲಿ ಸುಮಾರು 1 ಕೆಜಿ ಗಿಂತ ಹೆಚ್ಚು ತೂಕದ ಕಲ್ಲು ಕಂಡಂದಿದ್ದು ಅದನ್ನು ಪರೀಕ್ಷಿಸಿದ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯ ಕಿಡ್ನಿ ಹಾಗೂ ಮೂತ್ರರೋಗ ಶಾಸ್ತ್ರಚಿಕಿತ್ಸಕರಾದ “”ಡಾ!!ದೇವೇಂದ್ರ ಜಲ್ದೆ”” ಹಾಗೂ ಸೋಮಶೇಖರ್ ಕೆರೂಡಿ ತಂಡದವರು ಸೇರಿ ಸುಮಾರು 3 ಗಂಟೆಗಳ ಸುದೀರ್ಘ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆಪರೇಷನ್ ಯಶಸ್ವಿಗೋಳಿಸಿದ್ದಾರೆ.

ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯಲ್ಲಿ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾಗಿ ಡಾ: ದೇವೇಂದ್ರ ಜಲ್ದೆ ಹಾಗೂ ಆಪರೇಷನ್ ಮಾಡಿಸಿಕೊಂಡ ವ್ಯಕ್ತಿ ಮಾಧ್ಯಮಗಳ ಜೊತೆ ತಮ್ಮ ಅನುಭವಗಳನ್ನು ಹಂಚ್ಚಿಕೊಂಡರು.

Leave a Reply

Your email address will not be published. Required fields are marked *