ವಸತಿ ಶಾಲೆ 14ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಶಿಕ್ಷಕ


ಬೆಳಗಾವಿ : ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿದ್ಧ ಅಲ್ಪಸಂಖ್ಯಾತರ ಮುರಾರಜಿ ದೇಸಾಯಿ ವಸತಿ ಶಾಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ.

ಅಲ್ಪಸಂಖ್ಯಾತರ ಮುರಾರಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಜೆ 7:30ರ ಸುಮಾರಿಗೆ ಶಾಲಾ ವಸತಿ ಗ್ರಹದಲ್ಲಿ ಶಿಕ್ಷಕ ಪ್ರಶ್ನೆ ಪತ್ರಿಕೆ ಸರಿಪಡಿಸಿತ್ತಿರುವಾಗ ಕೆಲವು ಮಕ್ಕಳು ಸಲ್ಪ ಅವಾಜ್ ಮಾಡಿದ ಕಾರಣಕ್ಕೆ ಒಟ್ಟು 14 ಕ್ಕೂ ಹೆಚ್ಚು ಮಕ್ಕಳಿಗೆ ಹಿಂದಿ ಪಾಠ ಮಾಡುವ ಶಿಕ್ಷಕ ಬರೆ ಬಾವು ಬರುಹಾಗೆ ಥಳಿಸಿದ್ದಾರೆ.

ಮನ ಬಂದಂತೆ ಹಾಸ್ಟೆಲ್ ಮಕ್ಕಳನ್ನು ಥಳಿಸಿದ ಶಿಕ್ಷಕ  ಮೇಲೆ ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದರು.

ಪಾಲಕರು ತಮ್ಮ ಮಕ್ಕಳು ಅಭ್ಯಾಸ ಮಾಡಲಿ. ಉನ್ನತ ಹುದ್ದೆ ಪಡೆಯುವಂತಾಗಲಿ ಎಂದು ಏನೇನೋ ಆಸೆ ಕನಸುಗಳನ್ನು ಇಟ್ಟುಕೊಂಡು ಕಷ್ಟವಾದರೂ ಮಕ್ಕಳನ್ನು ದೂರದ ಹಾಸ್ಟೆಲ್ ನಲ್ಲಿ ಬಿಟ್ಟಿರುತ್ತಾರೆ. ಆದರೆ ಅಲ್ಲಿ ಅವರು ಆರೋಗ್ಯವಾಗಿಲ್ಲ ಅಥವಾ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಗೊತ್ತಾದರೆ ಪಾಲಕರು ಸಮಾಧಾನದಿಂದ ಇರಲು ಹೇಗೆ ಸಾಧ್ಯ? ಅದೇ ರೀತಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಥಳಿಸಿದ ಆರೋಪ ನಡೆದಿದೆ.

ಮುಗ್ಧ ಮುಕ್ಕಳನ್ನ ಮನಸೊಯಿಚ್ಚೆ ಥಳಿಸಿರುವ ಆರೋಪ ಹಿನ್ನಲೆ ಪ್ರತಿಭಟನೆ ಮಾಡಲಾಗುತ್ತಿದೆ. ಸಮೀಪದ ಸಾಲಹಳ್ಳಿ ಗ್ರಾಮದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ಜರುಗಿದೆ.

ವಸತಿ ಶಾಲೆಯ ಮಕ್ಕಳಿಗೆ ನಾನಾ ಕಾರಣಗಳಿಂದ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬರುತ್ತಿದೆ. ಸ್ವತಾ ವಿದ್ಯಾರ್ಥಿಗಳೇ ಅದಕ್ಕೆ ಸಾಕ್ಷಿ.

ಈ ಒಂದು ಪ್ರಕರಣದ ಬಗ್ಗೆ ಅಲ್ಪಸಂಖ್ಯಾತ ಮೂರಾಜಿ ವಸತಿ ನಿಲಯದ, ಬೆಳಗಾವಿ ಜಿಲ್ಲಾಧಿಕಾರಿಯಾದ ಆದಿಲರಶೀದ ಮೀರಜನವರ ಇದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿದ ಶಿಕ್ಷಕರ ವಿರುದ್ದ ಸೂಕ್ತವಾದ ಕ್ರಮ ಜಾರಿ ಮಾಡಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *