ಪೋಲೀಸ್ ಮತ್ತು ಪಂಚಾಯತಿಗಳ ಸಂಬಂಧ…


========================
✍️ ರಚನೆ :- ಚಿನ್ನಪ್ಪ ಕುಂದರಗಿ
Freelance Research Content Writer


ನಮ್ಮ ದೇಶದಲ್ಲಿ ಅನಂತಕಾಲದಿಂದ ಗ್ರಾಮ ಪಂಚಾಯತಿಗಳು ರಾಷ್ಟ್ರದ ಏಳಿಗೆಯಲ್ಲಿ ವಿವಿಧ ಪಾತ್ರವನ್ನು ವಹಿಸಿವೆ. ಸ್ವಾತಂತ್ರ್ಯದ ನಂತರ ಈ ಗ್ರಾಮ ಪಂಚಾಯತಿಗಳೇ ಹಳ್ಳಿಗಳ ಆಡಳಿತವನ್ನು ನೋಡಿಕೊಳ್ಳುತ್ತಿವೆ. ದಿನೇ ದಿನೇ ಇವು ಬದಲಾಗುತಿದ್ದು ಸ್ಥಳೀಯ ಆಡಳಿತ, ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿವೆ. ಆದ್ದರಿಂದ ಪೋಲೀಸರು ಈ ಗ್ರಾಮ ಪಂಚಾಯತಿಗಳ ಮಹತ್ವವನ್ನು
ಅರಿತುಕೊಂಡು ಅವುಗಳ ಅಭಿವೃದ್ಧಿಗೆ ಸಾರ್ವಜನಿಕರು ಶ್ರಮಿಸುವಂತೆ ಮಾಡಿ ತಮ್ಮ ಎಲ್ಲಾ ರೀತಿಯ ಸಹಕಾರವನ್ನು ಪಂಚಾಯತಿಗಳಿಗೆ ನೀಡಬೇಕು.

ಭಾರತದಲ್ಲಿ, ಪೋಲೀಸ್ ಮತ್ತು ಪಂಚಾಯತಿಗಳು ಸ್ಥಳೀಯ ಆಡಳಿತದ ಎರಡು ಪ್ರಮುಖ ಸಂಸ್ಥೆಗಳಾಗಿವೆ. ಒಂದು ಕಡೆ ಪೋಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಹೊತ್ತಿದ್ದರೆ, ಮತ್ತೊಂದೆಡೆ ಪಂಚಾಯತಿಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನ್ನು ನಿರ್ವಹಿಸುತ್ತವೆ. ಈ ಎರಡು ಸಂಸ್ಥೆಗಳ ನಡುವಿನ ಸಂಬಂಧವು ಸಮಾಜದ ಸುಗಮ ಕಾರ್ಯನಿರ್ವಹಣೆಗೆ ಅತ್ಯಂತ ಮುಖ್ಯವಾಗಿದೆ.

ಬೀಟ್ ಕಾನ್ಸ್ ಟೇಬಲ್‌ಗಳು ಗ್ರಾಮ ಪಂಚಾಯಿತಿಯೊಡನೆ ಹೆಚ್ಚಿನ ಸಂಬಂಧ ಇಟ್ಟುಕೊಳ್ಳುವುದರ ಮೂಲಕ ಪೋಲೀಸರ ಮತ್ತು ಗ್ರಾಮ ಪಂಚಾಯತಿಯೊಡನೆ
(ಗ್ರಾಮ ಜನತೆ) ಸಂಬಂಧ ಹತ್ತಿರ ಬರುತ್ತದೆ.

ಪೋಲೀಸರ ದೈನಂದಿನ ಕರ್ತವ್ಯಗಳಲ್ಲಿ ಗ್ರಾಮ ಪಂಚಾಯತಿ ಗಳ ಸಹಕಾರವಾದ ಸುವ್ಯವಸ್ಥಿತ ಆಡಳಿತವನ್ನು ನಡೆಸಿಕೊಂಡು ಹೋಗುವುದು ಕಷ್ಟ. ಅದರಲ್ಲೂ ಈ ಸಂದರ್ಭಗಳಲ್ಲಿ ಗ್ರಾಮಪಂಚಾಯ್ತಿಗಳು ಪೋಲೀಸರಿಗೆ ಸಕ್ರಿಯ ನೆರವನ್ನು ಕೊಂಡದಿದ್ದ ರಿಂದ . ಅಪರಾಧಗಳನ್ನು ತಡೆಗಟ್ಟುವುದು ಬಹಳ ಕಠಿಣವಾದ ಕೆಲಸ, ಆದ್ದರಿಂದ ಸಾರ್ವಜನಿಕರಿಗೆ ಇವೆರಡರ ಹೊಂದಾಣಿಕೆ ಮತ್ತು ಸೇವೆ ಅತ್ಯಗತ್ಯ. ಇದಲ್ಲದೆ ಪೋಲೀಸರ ಕರ್ತವ್ಯಗಳಾದ ಪಾನನಿರೋಧ, ಭ್ರಷ್ಟಾಚಾರ, ಜೂಜಾಡುವಿಕೆ ಮತ್ತು ಆಶಾ ವೃತ್ತಿ ಇಂತಹ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವೇ ಇಲ್ಲ. ಒಂದು ಸಣ್ಣ ವಿರುವ ಪೊಲೀಸ್ ಠಾಣೆಯ ದಳಕ್ಕೆ ಎಲ್ಲಾ ಹಳ್ಳಿಗಳಲ್ಲೂ ಈ ಎಲ್ಲಾ ಕೇಸುಗಳನ್ನು
ಮುಪಂಚಾಯ್ತಿಗಳ ನೆರವಿಲ್ಲದೆ ಮಾಡುವುದು ಸಾಧ್ಯವೆ ? ಆದ್ದರಿಂದ ಪೋಲೀಸ್ ಠಾಣೆಯ ಮಟ್ಟದಲ್ಲಿ ಸರಿಯಾಗಿ ಅಪರಾಧ್ಯಾತಕ ನ್ಯಾಯದ ಆಡಳಿತ ವರ್ಗದವರ
ಪಂಚಾಯ್ತಿಗಳ ಆಡಳಿತ ವರ್ಗದವರ ಸೌಹಾರ್ದ ಸಂಬಂಧ ಅನಿವಾರ್ಯ, ಪೋಲಿಸ್ ಠಾಣೆಯ ಎಲ್ಲಾ ವರ್ಗದ ಅಧಿಕಾರಿಗಳು ಪಂಚಾಯ್ತಿಯವರು ಯಾವ
ಕಾಲದಲ್ಲಿ ಯಾವುದೇ ರೀತಿಯ ನೆರವನ್ನು ಕೇಳಿದರೂ ಪೋಲೀಸರು ಅಂತಹ ಸಹಾಯ ವನ್ನು ಮಾಡಲು ಸಿದ್ಧರಿರಬೇಕು,

ಗ್ರಾಮ ಪಂಚಾಯ್ತಿಗಳ ಸ್ಥಳೀಯ ಗ್ರಾಮಸ್ಥರನ್ನು, ಪೋಲೀಸಿನವರಿಗೆ ಇವರು ಸಕಾಲದಲ್ಲಿ ನೀಡಬೇಕಾದ ಸಹಕಾರವನ್ನು ಕುರಿತು ಶಿಕ್ಷಣ ನೀಡಿ ಪೋಲೀಸರ ಬಗ್ಗೆ
ಒಳ್ಳೆಯ ಅಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸಬೇಕು. ಗ್ರಾಮದ ಪ್ರಜೆಗಳು ಪೋಲೀಸರನ್ನು ಸಮಾಜದ ಹಿತೈಷಿಗಳು, ಸ್ನೇಹಿತರೆಂದು ಕಾಣಬೇಕು.
ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ಭೇಟಿಯಿತ್ತಾಗ ಅವರು ಗ್ರಾಮಪಂಚಾಯ್ತಿಗಳ ಎಲ್ಲಾ ಸದಸ್ಯರೊಡನೆ ವ್ಯವಹರಿಸಿ ಅವರ ಕುಂದು ಕೊರತೆಗಳನ್ನು ವಿಚಾರಿಸಿ ಸುವ್ಯವಸ್ಥಿತ ಪೋಲೀಸ್ ಆಡಳಿತಕ್ಕೆ ದಾರಿ ಮಾಡಬೇಕು.

ಇದರಿಂದ ಗ್ರಾಮಪಂಚಾಯ್ತಿಗಳ ಸದಸ್ಯರುಗಳೂ ಸಹ ಪೋಲಿಸರ ಮೇಲೆ ಅಭಿಮಾನವಿಟ್ಟು ಕೊಂಡು ಅವರ ನಿರಂತರ ಸಹಕಾರವನ್ನು ಇನ್ನೂ ಹೆಚ್ಚಿಸುತ್ತಾ ಹೋಗುತ್ತಾರೆ. ಇದರಿಂದ ಪೋಲೀಸರು ಗ್ರಾಮಾಂತರ ಪ್ರದೇಶಗಳಲ್ಲಿ ಸುಲಭವಾಗಿ ಜನಪ್ರಿಯರಾಗಿ ಕೆಲಸ ನಿರ್ವಹಣೆ ಮಾಡಬಹುದು.

========================
✍️ ರಚನೆ :- ಚಿನ್ನಪ್ಪ ಕುಂದರಗಿ
Freelance Research Content Writer

ಸಂಸ್ಥಾಪಕ ರಾಜ್ಯಾಧ್ಯಕ್ಷರು
ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ (ನೋಂ) ಕರ್ನಾಟಕ

Leave a Reply

Your email address will not be published. Required fields are marked *