ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ವಲಯವಾರು ವರ್ಗಾವಣೆಗೆ ಅರ್ಹರಾದ ಶಿಕ್ಷಕರ ತಾತ್ಕಾಲಿಕ ಪಟ್ಟಿ ಬಿಡುಗಡೆಯಾಗಿತ್ತು.
ವರ್ಗಾವಣೆಗೆ ಅರ್ಹರಿದ್ದ ಹಲವು ಶಿಕ್ಷಕರ ಹೆಸರು ಅಪ್ ಡೇಟ್ ಆಗದಿರುವುದನ್ನು ಗಮನಿಸಿ ವರ್ಗಾವಣೆ ಪ್ರಕ್ರಿಯೆಗೆ ಸಮಯ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
ಏಪ್ರಿಲ್ 19ರ ರಾತ್ರಿ 10.30ರೊಳಗೆ ಬಿಇಒಗಳು ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ನಂತರ ಅಪ್ಡೇಟ್ ಮಾಡಲು ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ.
ಏಪ್ರಿಲ್ 20ರಂದು ವಲಯ ವರ್ಗಾವಣೆಗೆ ಅರ್ಹರಾದ ಶಿಕ್ಷಕರ ತಾತ್ಕಾಲಿಕ ಕರಡು ಪಟ್ಟಿಯನ್ನು ಬಿಇಒಗಳು ಪ್ರಕಟಿಸಬೇಕು. ಏಪ್ರಿಲ್ 20 ರಿಂದ 22 ರವರೆಗೆ ಪ್ರಕಟಿತ ತಾತ್ಕಾಲಿಕ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ಏ. 23ರಂದು ಎ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಸಲ್ಲಿಸಿದ ಆಕ್ಷೇಪಣೆ ದಾಖಲೆಗಳನ್ನು ಆನ್ಲೈನ್ ನಲ್ಲಿ ಪರಿಶೀಲಿಸಿ ತೀರ್ಮಾನ ಪ್ರಕಟಿಸಲು ಬಿಇಒಗಳು ಮತ್ತು ಡಿಡಿಪಿಐ ಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಏಪ್ರಿಲ್ 24ರಂದು ವಲಯ ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಆದ್ಯತೆಯ ಕರಡುಪಟ್ಟಿ ಪ್ರಕಟಿಸಲು ತಿಳಿಸಲಾಗಿದೆ.