ನಕಪುರ: ಕಸಬಾ ಹೋಬಳಿ ಬರಡನಹಳ್ಳಿ ಗ್ರಾಮದಲ್ಲಿ ಮಾರಮ್ಮ ಅಗ್ನಿಕೊಂಡೋತ್ಸವವು ಬುಧವಾರ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯಿತು.

ಮಂಗಳವಾರ ರಾತ್ರಿ ನಡೆದ ಎಳವಾರ ಕಾರ್ಯಕ್ರಮದಲ್ಲಿ ಸೌದೆಯನ್ನು ಕೊಂಡದಲ್ಲಿ ಹಾಕಿ ಅಗ್ನಿಪೂಜೆ ನೆರವೇರಿಸಿ ಕೆಂಡವನ್ನಾಗಿ ಮಾಡಲಾಯಿತು.

ಬುಧವಾರ ಬೆಳಿಗ್ಗೆ ಗ್ರಾಮದ ಜನರು ಚಿಕ್ಕಹೊಳೆಯಲ್ಲಿ ಗಂಗಾಪೂಜೆಯನ್ನು ನೆರವೇರಿಸಿ, ಮೆರವಣಿಗೆಯಲ್ಲಿ ದೇವರ ಮೂರ್ತಿಯನ್ನು ಕರೆತಂದರು. ಗ್ರಾಮದ ಮಹಿಳೆಯರು ತಂಬಿಟ್ಟಿನ ಆರತಿಯನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು.

ದೇವಾಲಯದ ಅರ್ಚಕ ಮಾರಮ್ಮನ ಗಿಂಡಿಯನ್ನು ಹೊತ್ತು ಯಶಸ್ವಿಯಾಗಿ ಅಗ್ನಿಕೊಂಡವನ್ನು ಹಾಯ್ದರು. ಬುಧವಾರ ರಾತ್ರಿ ಗ್ರಾಮದಲ್ಲಿ ದೇವರ ಮೆರವಣಿಗೆ ಉತ್ಸವ ಕಾರ್ಯಕ್ರಮ ನಡೆಯಿತು. ದೇವರಿಗೆ ಮನೆ ಮುಂದೆ ಆರತಿ ನೀಡಿ ಪೂಜೆ ಸಲ್ಲಿಸಿದರು.

ಬರಡನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಮಾರಮ್ಮ ದೇವಿಯ ಕೊಂಡೋತ್ಸವದಲ್ಲಿ ಅರ್ಚಕ ವೀರಭದ್ರ ಅವರು ಮಾರಮ್ಮನ ಗಿಂಡಿಯನ್ನು ಹೊತ್ತು ಮೆರವಣಿಗೆಯಲ್ಲಿ ಹೋಗುತ್ತಿರುವುದುಬರಡನಹಳ್ಳಿ ಗ್ರಾಮದಲ್ಲಿ ಬುಧವಾರ ಅರ್ಚಕ ವೀರಭದ್ರ ಅಗ್ನಿಕೊಂಡವನ್ನು ಯಶಸ್ವಿಯಾಗಿ ಆಯುವುದನ್ನು ಸಾವಿರಾರು ಜನರು ವೀಕ್ಷಣೆ ಮಾಡಿದರು

Leave a Reply

Your email address will not be published. Required fields are marked *