ಬೆಂಗಳೂರು: ಮೇ.7ರಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ 14 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಈ ಮತದಾನ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಈ ಕುರಿತಂತೆ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು ರಾಜ್ಯದಲ್ಲಿ ದಿನಾಂಕ 26-04-2024ರಂದು ಮೊದಲ ಹಂತದ ಮತದಾನದ ಬಳಿಕ, ದಿನಾಂಕ 07-05-2024ರಂದು ಎರಡನೇ ಹಂತದಲ್ಲಿ 14 ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಂದಿದ್ದಾರೆ.

ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಮತದಾನ ಅಂತ್ಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಮತ್ತು ಮತ ಏಣಿಕೆ ದಿನದಂದು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ, ಒಣದಿನಗಳೆಂದು ಘೋಷಿಸಲು ನಿರ್ದೇಶಿಸಲಾಗಿದೆ.

ಹೀಗಾಗಿ ದಿನಾಂಕ 05-05-2024ರ ಸಂಜೆ 5 ಗಂಟೆಯಿಂದ ದಿನಾಂಕ 07-05-2024ರ ಮದ್ಯರಾತ್ರಿ 12 ಗಂಟೆಯವರೆಗೆ ಮತ್ತು ಮತ ಏಣಿಕೆ ಪ್ರಯುಕ್ತ ದಿನಾಂಕ 04-06-2024ರಂದು ಬೆಳಿಗ್ಗೆ 6 ಗಂಟೆಯಿಂದ ಮದ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಈ ಜಿಲ್ಲೆಗಳಲ್ಲಿ ಮೇ.5ರಿಂದ 7ರವ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧ

ಚಿಕ್ಕೋಡಿ
ಬೆಳಗಾವಿ
ಬಾಗಲಕೋಟೆ
ವಿಜಯಪುರ
ಕಲಬುರಗಿ
ರಾಯಚೂರು
ಬೀದರ್
ಕೊಪ್ಪಳ
ಬಳ್ಳಾರಿ
ಹಾವೇರಿ
ಧಾರವಾಡ
ಉತ್ತರ ಕನ್ನಡ
ದಾವಣಗೆರೆ
ಶಿವಮೊಗ್ಗ

Leave a Reply

Your email address will not be published. Required fields are marked *