ಬೆಂಗಳೂರು: ಬೆಂಗಳೂರಿನಿಂದ ಕೊಚ್ಚಿಗೆ ಹೊರಟಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಮರಳೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಲ್ಲಿ ಲ್ಯಾಂಡ್ ಆದ ಘಟನೆ ಶನಿವಾರ ಜರುಗಿದಿದೆ.
ಬೆಂಗಳೂರಿನಿಂದ ಕೇರಳ ರಾಜ್ಯದ ಕೊಚ್ಚಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು (IX 1132 2312) ನಿಲ್ದಾಣದಿಂದ ಆಗಸಕ್ಕೆ ಜಿಗಿದ ಕೆಲವೇ ಕ್ಷಣಗಳಲ್ಲಿ ಮರಳಿ ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನದ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹಾರಿದ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಪಿಟಿಐಗೆ ನೀಡಿದ ಮಾಹಿತಿ ಪ್ರಕಾರ, ವಿಮಾನ ವಾಪಾಸ್ ಲ್ಯಾಂಡ್ ಆಗುತ್ತಿದ್ದಂತೆ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತ್ವರಿತವಾಗಿ ವಿಮಾನದಿಂದ ಕೆಳಗೆ ಇಳಿಸಲಾಗಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಜೀವ ಹಾನಿ, ಗಾಯಗಳು ಆಗಿಲ್ಲ ಎಂದು ತಿಳಿಸಿದ್ದಾರೆ.
ಇಂಜಿನ್ ನಲ್ಲಿ ಆದ ಅವಘಡದಿಂದ ವಿಮಾನವನ್ನು ತುರ್ತುಭೂಸ್ಪರ್ಶ ಮಾಡಬೇಕಾಯಿತು. ಇದರಿಂದ ಪ್ರಯಾಣಿಕರ ಸಂಚಾರದಲ್ಲಿ ತೊಂದರೆ ಆಗಿದೆ. ಇದಕ್ಕೆ ಏರ್ ಇಂಡಿಯಾ ವಿಷಾಧ ವ್ಯಕ್ತಪಡಿಸುತ್ತದೆ. ಸಾಧ್ಯವಾದಷ್ಟು ಬೇಗ ಪ್ರಯಾಣಿಕರಿಗೆ ಪರ್ಯಾಯ ಸಂಚಾರದ ಸೇವೆ ಕಲ್ಪಿಸಲಾಗುವುದು ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ವಕ್ತಾರರು ಹೇಳಿದರು.
179 ಮಂದಿ ಪ್ರಯಾಣಿಕರು ಸ್ಥಳಾಂತರ
ಬೆಂಗಳೂರಿನಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಇಂಜಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಾಗಾದರೆ ಆಗಿದ್ದೇನು, ಆಕಸ್ಮಿಕ ಬೆಂಕಿಗೆ ಕಾರಣವೇನು? ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
179 ಪ್ರಯಾಣಿಕರು ಮಂದಿಯನ್ನು ಹೊತ್ತು ಆಗಸಕ್ಕೆ ಜಿಗಿದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಏರ್ ಟ್ರಾಫಿಕ್ ಕಂಟ್ರೋಲರ್ ಗೆ ಮಾಹಿತಿ ಪೈಲಟ್ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಿಸಿದರು.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತುರ್ತು ಅಗ್ನಿಶಾಮಕ ನಿಯಂತ್ರಣ ತಂಡಗಳು ಬೀಡು ಬಿಟ್ಟಿವೆ. ತುರ್ತು ಭೂಸ್ಪರ್ಶ ಮಾಡಿದ ಕೂಡಲೇ ಬೆಂಕಿ ನಂದಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಜನವರಿ 2001 ರಲ್ಲಿ KIA ಅನ್ನು ನಿರ್ವಹಿಸುವ ವಿಶೇಷ ಉದ್ದೇಶದ ಘಟಕವಾಗಿ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಅನ್ನು ರಚಿಸಿತು.
ಪೈಲಟ್‌ನ ಸಮಯ ಪ್ರಜ್ಞೆಯಿಂದ ವಿಮಾನದಲ್ಲಿದ್ದ ಎಲ್ಲ 179 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಯಶಸ್ವಿಯಾಗಿ ವಿಮಾನದಿಂದ ಸ್ಥಳಾಂತರಿಸಲಾಗಿದೆ ಎಂದು ಬಿಐಎಎಲ್ ವಕ್ತಾರರು ಮಾಹಿತಿ ಈಡಿದ್ದಾರೆ.