Latest Post

ಪೋಲೀಸ್ ಮತ್ತು ಪಂಚಾಯತಿಗಳ ಸಂಬಂಧ… ಬಾಗಲಕೋಟೆ | ಎಸ್ ಪಿ.ಹಿರೆಮಠ ಮನೆ ಮೇಲೆ ಲೋಕಾಯುಕ್ತ ದಾಳಿ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಪಂ ಪಿಡಿಒ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜನಸ್ಪಂದನ ಕಾರ್ಯಕ್ರಮವನ್ನು ಬೈಕ್ ರ್ಯಾಲಿ ಮೂಲಕ ಪಟ್ಟಣದ ಸರಸ್ವತಿ ಕಲ್ಯಾಣ ಮಂಟಪದವರೆಗೆ ತಲುಪಲಾಯಿತು.

ಈ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಾರ್ವಜನಿಕರಿಂದ ಬಂದಂತ ಅರ್ಜಿಯನ್ನು ತೆಗೆದುಕೊಂಡರು.

ತಾಲೂಕಿನ ಆಯಾ ಇಲಾಖೆಗಳಿಂದ ಅರ್ಜಿ ಹಾಕುವುದು 10 ಕಂಪ್ಯೂಟರ್ ಇಟ್ಟು ಅಲ್ಲಿ ಬಂದಂತಹ ಅರ್ಜಿಗಳನ್ನು ನೇರ ಆನ್ಲೈನ್ ಮೂಲಕ ಅರ್ಜಿಗಳನ್ನು ತೆಗೆದುಕೊಂಡರು ಮತ್ತು ಆರೋಗ್ಯ ಇಲಾಖೆಯಿಂದ ಈ ಕಾರ್ಯಕ್ರಮಕ್ಕೆ ಬಂದಂತ ಸಾರ್ವಜನಿಕರಿಗೆ 125 ಹೆಚ್ಚು ಸಾರ್ವಜನಿಕರಿಗೆ ಬಿಪಿ ಶುಗರ್ ಚೆಕ್ ಮಾಡಲಾಯಿತು.

ರಾಜ್ಯ ಸರ್ಕಾರದ ನಿರ್ದೇಶನದಂತೆ ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಳ್ಳುತ್ತಿದ್ದು, ಸಮಸ್ಯೆಗಳನ್ನು ಆಲಿಸಿ, ಪರಿಶೀಲಿಸಿ ಪರಿಹಾರ ನೀಡಲಾಗುತ್ತಿದೆ. ಆಡಳಿತವೆ ಜನರ ಮನೆ ಬಾಗಿಲಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಸ್ಪಂಧನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಸಾರ್ವಜನಿಕರಿಂದ ಸ್ವೀಕೃತವಾದಂತಹ ಅರ್ಜಿಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವುದು ಹಾಗೂ ಸಾರ್ವಜನಿಕರು ಸರಕಾರಿ ಕಚೇರಿಗೆ ಅಲೆದಾಡುವದನ್ನು ತಪ್ಪಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವದರ ಮೂಲಕ ಸಮಸ್ಯೆಗಳ ನಿವಾರಣಗೆ ಮುಂದಾಗಬೇಕು. ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯಡಿ ದಾಖಲಾಗುವ ಸಾರ್ವಜನಿಕ ಅರ್ಜಿಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕಾಲಮಿತಿಯೊಳಗಾಗಿಯೇ ಇತ್ಯರ್ಥ ಪಡಿಸಬೇಕು. ಜನಸ್ಪಂಧನ ಕಾರ್ಯಕ್ರಮದಡಿ ಸ್ವೀಕೃತವಾಗುವ ಅರ್ಜಿಗಳ ಕುರಿತು ಯಾವುದೇ ರೀತಿಯ ಉದಾಸಿನತೆ, ನಿರ್ಲಕ್ಷ ಮನೋಭಾವ ತೋರದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕಟ್ಟುನಟ್ಟಿನ ಸೂಚನೆ ನೀಡಿದರು.

ಜನಸ್ಪಂದನ ಕಾರ್ಯಕ್ರಮದಡಿ ರಸ್ತೆ, ಚರಂಡಿ, ಬೆಳೆವಿಮೆ, ಪಹಣಿ ಪತ್ರ ತಿದ್ದುಪಡಿ, ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸಾರ್ವಜನಿಕರಿಂದ ಸ್ವೀಕರಿಸಿದರು.

ತಾಲೂಕಿನಲ್ಲಿ ಹಗಲು ರಾತ್ರಿ ಅನದೆ ಮರಳು ದದ್ದೇ ಅಕ್ರಮವಾಗಿ ನಡೆಯುತ್ತಿದ್ರು ಅಧಿಕಾರಿಗಳು ಇದರ ಬಗ್ಗೆ ಯಾವುದು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮಾಧ್ಯಮದವರು ಜಿಲ್ಲಾಧಿಕಾರಿಗೆ ಪ್ರಶ್ನೆ ಮಾಡಿದಾಗ ಆದಷ್ಟು ಬೇಗ ಅದರ ಬಗ್ಗೆ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಮಾಡುತ್ತೇನೆ ಎಂದರು

ಈ ಸಂದರ್ಭದಲ್ಲಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, . ಜಿ.ಪಂ. ಸಿ.ಇ.ಓ. ರಾಹುಲ ಶಿಂಧೆ, ಶ್ರೀಮತಿ. ಪ್ರಭಾವತಿ ಜಿ. ಫಕಿರಪೂರ ಉಪ-ವಿಭಾಗಾಧಿಕಾರಿಗಳು. ಬೈಲಹೊಂಗಲ ಉಪವಿಭಾಗ ಡಿವೈಎಸ್ಪಿ ರವಿ ನಾಯಕ ರಾಮದುರ್ಗ ತಹಶೀಲ್ದಾರ ಪ್ರಕಾಶ ಹೊಳೆಪಗೋಳ. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಪ್ರವೀಣ್ ಕುಮಾರ್ ಸಾಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿಗಾರರು : ಮಂಜುನಾಥ ಕಲಾದಗಿ ರಾಮದುರ್ಗ

Leave a Reply

Your email address will not be published. Required fields are marked *