ತುಮಕೂರು:- ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.
ಗೀತಾ, ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ಹೇಳಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ರೈತ ಮಲ್ಲಿಕಾರ್ಜುನ್ ನಿಂದ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ.
33 ಗುಂಟೆ ಜಮೀನನ್ನ ಭೂ ಪರಿವರ್ತನೆ ಮಾಡಿಕೊಡಲು 3 ಲಕ್ಷ ಲಂಚಕ್ಕೆ ತಹಶೀಲ್ದಾರ್ ಗೀತಾ ಬೇಡಿಕೆಯಿಟ್ಟಿದ್ದರು. ಅದರಂತೆ ಇಂದು ಬೆಳಗ್ಗೆ 20 ಸಾವಿರ ಹಣ ಪಡೆಯುವಾಗ ಲೋಕಾ ಅಧಿಕಾರಿಗಳು ಸಿಬ್ಬಂದಿ. ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ತಹಶಿಲ್ದಾರ್ ಗೀತಾರನ್ನ ಲೋಕಾಯುಕ್ತ ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ !