ಗ್ರಾಮೀಣ ಭಾಗದ ಜನರಿಗೆ ಸಿಹಿ ಸುದ್ದಿ ನರೇಗಾ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಅವರ ಸಂಬಳ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಗೆ ಮುಂಚಿತವಾಗಿ, ಕೇಂದ್ರ ಸರ್ಕಾರವು 2024-25 ನೇ ಹಣಕಾಸು ವರ್ಷಕ್ಕೆ ಜಾರಿಯಾಗುವಂತೆ MGNREGA ಕಾರ್ಮಿಕರ ವೇತನ ದರದಲ್ಲಿ 3-10 ಶೇಕಡಾ ಹೆಚ್ಚಳವನ್ನು ಘೋಷಿಸಲಿದೆ. ಹೊಸ ವೇತನ ದರಗಳು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿವೆ.

ಸಾರ್ವತ್ರಿಕ ಚುನಾವಣೆಗೆ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವೇತನ ದರಗಳ ಕುರಿತು ಅಧಿಸೂಚನೆ ಹೊರಡಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ ಚುನಾವಣಾ ಆಯೋಗದಿಂದ ಅನುಮತಿ ಕೋರಿದೆ. ಇಂದು ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *