ಗದಗ:- ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಗದಗ ನಗರದ ಸಾಯಿ ಬಡಾವಣೆಯಲ್ಲಿ ಕೃಷಿ ಅಧಿಕಾರಿ ಸಹದೇವ ಯರಗೊಪ್ಪರ ಮನೆ ಮೇಲೆ ರೇಡ್ ನಡೆದಿದ್ದು, ಗದಗ ಮೂಲದ ಸಹದೇವ ಯರಗೊಪ್ಪ ಮನೆ ಸೇರಿದಂತೆ ಏಳು ಜಾಗದಲ್ಲಿ ತನಿಖೆ ನಡೆದಿದೆ.
ಗದಗನ ರೋಣ ತಾಲೂಕಿನ ಮೆಣಸಗಿಯ ಸ್ವಗೃಹದಲ್ಲೂ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಅನುಮಾನದ ಹಿನ್ನೆಲೆ ಈ ದಾಳಿ ನಡೆದಿದೆ. ಲೋಕಾಯುಕ್ತ ಎಸ್ ಪಿ ಸತೀಶ್ ಚಿಟಗುಬ್ಬಿ ನೇತೃತ್ವದಲ್ಲಿ ಡಿವೈಎಸ್ ಪಿ ವಿಜಯ್ ಬಿರಾದಾರ್, ಸಿಪಿಐ ರವಿ ಪುರುಷೋತ್ತಮ, ಅಯ್ಯನಗೌಡರ್, ದೀಪಾಲಿ, ಅಮರಶೆಟ್ಟರ್, ಗನಾಳ, ತಿಮಮಾಳ, ಇನ್ಸಪೆಕ್ಟರ್ ಸಾಹುಬಾಯಿ ತೇಲಿ ಸೇರಿದಂತೆ ಸಿಬ್ಬಂದಿಯಿಂದ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.